ಹಂದಿ ಜ್ವರ A (H1N1) ಬಾಧಿಸಿರುವುದನ್ನು ಹೇಗೆ ಗುರುತಿಸಬಹುದು?

Assalamu Alaikum
Dear All Brothers
بسم الله الرحمن الرحيم
A (H1N1) كيف يعرف بإصابة
ಹಂದಿ ಜ್ವರ A (H1N1) ಬಾಧಿಸಿರುವುದನ್ನು ಹೇಗೆ ಗುರುತಿಸಬಹುದು?
 
  * ಶರೀರದ ತಾಪಮಾಣ(ಬಿಸಿ) ವೃದ್ಧಿಸುವುದು.
  * ಮೂಗು ಬೆವರುವುದು.
  * ಗಂಟುಗಳಲ್ಲಿ ನೋವು ಅನುಭವವಾಗುವುದು.
  * ಗಂಟಲು ಕಟ್ಟುವುದು.
ಈ ಗುರುತುಗಳು ಕಂಡು ಬರುವುದು, ವೈರಸ್ ತಾಗಿರುವುದರಿಂದುಂಟಾಗುವ ಶರೀರದ ತಾಪಮಾಣ(ಬಿಸಿ) ಮಧ್ಯಮ ನೆಲೆಗೆ ತಲುಪುವಾಗಲಾಗಿದೆ.
 
ಜ್ವರ ಬಾಧಿಸಿದರೆ ಏನು ಮಾಡಬೇಕು?
  * ವಾಸ ಸ್ಥಳದಲ್ಲಿ ಇತರರೊಂದಿಗೆ ಬೆರೆಯದೆ ಅಗಲಿರಲು ಪ್ರಯತ್ನಿಸಿರಿ.
  * ಶರೀರದ ಹೆಚ್ಚಿದ ತಾಪಮಾಣವನ್ನು ಕಡಿಮೆ ಗೊಳಿಸಲಿಕ್ಕಿರುವ ಚಿಕಿತ್ಸೆಯನ್ನು ಸ್ವೀಕರಿಸಿರಿ.
  * ಇತರರೊಂದಿಗೆ ನೇರವಾಗಿ ಜೊತೆಗೂಡುವುದನ್ನು ಕೈಬಿಡಿರಿ.
  * ರೋಗವು ಇತರರಿಗೆ ಹರಡದಂತೆ ಮುನ್ಸೂಚನೆ ಕೈಗೊಳ್ಳಿರಿ.
       ü  ಕೈ ತೊಳೆಯಿರಿ.
       ü  ಕೆಮ್ಮುವಾಗ ಮತ್ತು ಸೀನುವಾಗ ಕರ್ಚೀಫ್ ನಂತಹ ವಸ್ತುಗಳಿಂದ ಬಾಯಿಯನ್ನು ಒತ್ತಿ ಹಿಡಿಯಿರಿ.
       ü  ಉಪಯೋಗಿಸಲ್ಪಟ್ಟ ಕರ್ಚೀಫ್ ನಂತಹ ವಸ್ತುಗಳನ್ನು ಎಸೆಯಲ್ಪಡಬೇಕಾದ ಸ್ಥಳದಲ್ಲೇ ಉಪೇಕ್ಷಿಸಿರಿ.
       ü  ಇತರರನ್ನು ಬೇಟಿಯಾಗುವ ಸಂದರ್ಭದಲ್ಲಿ ಮಾಸ್ಕ್ ಉಪಯೋಗಿಸಿರಿ.
 
ಈ ವೈರಸ್ ಗೆ ವಿರುದ್ಧ ಚಿಕಿತ್ಸೆ ಅಗತ್ಯಬರುವ ಸಂದರ್ಭ ಯಾವಾಗ?
   ಅಲ್ಲಾಹನ ಅನುಗ್ರಹದಿಂದ ಇಂತಹ ವಿವಿಧ ತರಹದ ವೈರಸ್ ಬಾಧೆಯು ಚಿಕಿತ್ಸೆ ಪಡೆಯದೆಯೇ ವಾಸಿಯಾದೀತು. ಆದರೆ ವೈರಸ್ ಬಾಧಿಸಿದ ಕೆಲವರಿಗೆ ವೈಧ್ಯರ ನಿರ್ದೇಶನ ಪ್ರಕಾರ ಚಿಕಿತ್ಸೆಯ ಅಗತ್ಯ ಬಂದೀತು.
 
ವೈಧ್ಯರನ್ನು ಯಾವಾಗ ಬೇಟಿಯಾಗತಕ್ಕದ್ದು
  ಈ ಕೆಳಗೆ ಸೂಚಿಸಲಾಗುವ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ವೈಧ್ಯರನ್ನು ಬೇಟಿಯಾಗಬೇಕು.
 
ಪ್ರಾಯಪೂರ್ತಿಯಾದವರಿಗೆ ಈ ಜ್ವರ ಬಾಧಿಸಿದರೆ ಕಂಡು ಬರುವ ಲಕ್ಷಣಗಳು.
     
  * ಶ್ವಾಸ ಕಟ್ಟುವುದು
  * ಎದೆ ನೋವುಂಟಾಗುವುದು
  * ಮಾನಸಿಕ ಅಸ್ವಸ್ಥತೆ
  * ಅತ್ಯಧಿಕವಾಗಿ ವಾಂತಿ ಮಾಡುತ್ತಲೇ ಇರುವುದು.
  * ಕಫದಲ್ಲಿ ರಕ್ತ.
  * ಮೂರು ದಿನದ ಬಳಿಕವೂ ಜ್ವರ ಕಡಿಮೆಯಾಗದಿರುವುದು.
  * ಜ್ವರ ಮತ್ತು ಕೆಮ್ಮು ಕೆಟ್ಟ ರೀತಿಯಲ್ಲಿ ಮುಂದುವರಿಯುವುದು.
 
ಮಕ್ಕಳಿಗೆ ಜ್ವರ ಬಾಧಿಸಿದರೆ ಕಂಡು ಬರುವ ಲಕ್ಷಣಗಳು
 
  * ಶ್ವಾಸ ಕಟ್ಟುವುದು.
  * ಚರ್ಮ ಮತ್ತು ಮುಖದಲ್ಲಿ ನೀಲಿ ಬಣ್ಣ ಗೋಚರವಾಗುವುದು.
  * ಅತ್ಯಧಿಕವಾಗಿ ವಾಂತಿ ಮಾಡುತ್ತಲೇ ಇರುವುದು.
  * ಕಠಿಣವಾದ ಕೋಪ ಅಥವಾ ನಿಶ್ಕ್ರಿಯತ್ವ.
  * ರೋಗ ಲಕ್ಷಣಗಳು ವಾಸಿಯಾದಂತೆ ಬಾಸವಾಗಿ ಪುನಃ ಜ್ವರ ಮತ್ತು ಕೆಮ್ಮು ಕೆಟ್ಟ ರೀತಿಯಲ್ಲಿ ಆವರ್ತಿಸುವುದು.
 
ಹಂದಿ ಜ್ವರದ A (H1N1)
ಲಕ್ಷಣಗಳು ಕಂಡು ಬಂದರೆ ಮೆಡಿಕಲ್ ಪರಿಶೋಧನೆಯ ಮೂಲಕ ಹಂದಿ ಜ್ವರವೋ ಎಂದು ದೃಢೀಕರಿಸಬೇಕೇ?
   ಕೆಲವು ನಿಶ್ಚಿತ ಅವಸ್ಥೆಯಲ್ಲಿ ಮಾತ್ರವೇ ಮೆಡಿಕಲ್ ಪರಿಶೋಧನೆಯ ಮೂಲಕ ದೃಢೀಕರಿಸಬೇಕಾಗಿರುವುದು. ಅಂದರೆ, ರೋಗ ಇನ್ನಷ್ಟು ಉಲ್ಭಣಗೊಳ್ಳುವುದು, ಆಸ್ಪತ್ರೆಗೆ ದಾಖಲಾಗುವುದು, ರೋಗಿಗಳಿಗೆ ಸೇವೆ ಸಲ್ಲಿಸುವ ಮೆಡಿಕಲ್ ಸಂಘದಲ್ಲಿ ಒಳಪಟ್ಟವನಾಗಿರುವುದು ಎಂಬಿತ್ಯಾದಿ ಅವಸ್ಥೆಗಳಲ್ಲಿ.
 
ಆಸ್ಪತ್ರೆಯಲ್ಲಿ ಅಡ್ಮಿಟಾಗಬೇಕೇ?
   ರೋಗವು ಉಲ್ಭಣ ಗೊಳ್ಳುವಂತಹ ಪ್ರಯಾಸ ಘಟ್ಟದಲ್ಲಿ ಮಾತ್ರವೇ ಅಡ್ಮಿಟಾಗಬೇಕಾದ ಅಗತ್ಯ ಬರುವುದು. ಆದರೆ ರೋಗದ ಲಕ್ಷಣಗಳು ಹೋಗುವ ತನಕ ವಾಸ ಸ್ಥಳದಲ್ಲಿ ಇತರರೊಂದಿಗೆ ಬೆರೆತು ಜೀವಿಸುವುದನ್ನು ಉಪೇಕ್ಷಿಸಿ ಅಗಲಿರಬೇಕು.
A (H1N1) كيف تقي نفسك وتساهم في الحد من الإنتشار انفلونزا الخنازير
ಹಂದಿ ಜ್ವರ ಹರಡುವುದನ್ನು ತಡೆಗಟ್ಟಲು ಹೇಗೆ ಸಹಕರಿಸಬಹುದು?
   * ಸಾಬೂನು ಮತ್ತು ನೀರನ್ನು ಉಪಯೋಗಿಸಿ ಕೈಯನ್ನು ಹಲವು ಬಾರಿ ಚೆನ್ನಾಗಿ ತೊಳೆಯಿರಿ.
  * ಕೆಮ್ಮುವಾಗ ಮತ್ತು ಸೀನುವಾಗ ಕರ್ಚೀಫ್ ನಂತಹ ವಸ್ತುಗಳಿಂದ ಬಾಯಿಯನ್ನು ಒತ್ತಿ ಹಿಡಿಯಿರಿ. 
   ಉಪಯೋಗಿಸಲ್ಪಟ್ಟ ಕರ್ಚೀಫ್ ನಂತಹ ವಸ್ತುಗಳನ್ನು ಎಸೆಯಲ್ಪಡಬೇಕಾದ ಸ್ಥಳದಲ್ಲೇ ಉಪೇಕ್ಷಿಸಿರಿ.
   * ಸಲಾಮ್ ಹೇಳುವ ಸಮಯದಲ್ಲಿ ಹಸ್ತಲಾಘವವನ್ನು ಪರಿಮಿತ ಗೊಳಿಸಿರಿ.

ABDUL MAJEED  S.M

Assalam Alaikum

Recent Photos

 

QUR'A'N

7.Let the man of means spend according to his means: and the man whose resources are restricted let him spend according to what God has given him. God puts no burden on any person beyond what He has given him. After a difficulty, God will soon grant relief.(athalaq -7)


"HADEES"

Click Here

TRUE TV

HINDUSTHAN

222888222

Site Clock